ಅಲ್ಟಾಜಿಮತ್ ಮೌಂಟ್
ಆಕಾಶಕಾಯಗಳ ಉನ್ನತಿ (ಅಲ್ಟಿಟ್ಯೂಡ್) ಮತ್ತು ಅಜಿಮತ್ (ನೋಡಿ- ಅಜಿಮತ್) ಅಳತೆ ಮಾಡಲು ಬಳಸುವ ಸಾಧನ. ಇದರಲ್ಲಿ ಊಧ್ರ್ವಾಕ್ಷ ಮತ್ತು ಕ್ಷಿತಿಜಾಕ್ಷಗಳ ಮೇಲೆ ಅಳವಡಿಸಿದ ಒಂದು ಟೆಲಿಸ್ಕೋಪ್ ಇದೆ. ಅಕ್ಷಗಳಿಗೆ ಅಂಶಾಂಕಿತ (ಗ್ರ್ಯಾಜುಯೇಟೆಡ್) ವೃತ್ತಗಳನ್ನು ಜೋಡಿಸಿದೆ. ಬೇಕಾದ ಆಕಾಶಕಾಯದೆಡೆಗೆ ಟೆಲಿಸ್ಕೋಪನ್ನು ಗುರಿಹಿಡಿದಾಗ ಈ ವೃತ್ತಗಳ ಮೇಲಿನ ಅನುರೂಪ ಸಂಖ್ಯೆಗಳು ಆ ಕಾಯದ ಉನ್ನತಿ ಮತ್ತು ಅಜಿಮತ್‍ಗಳನ್ನು ನೀಡುತ್ತವೆ. ಇಂದು ಭೂಮಿಯ ಮೇಲಿನ ವೀಕ್ಷಣೆಗಳಲ್ಲಿ ವಿಶೇಷವಾಗಿ ಬಳಸುತ್ತಾರೆ.										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ